ರೇಡಿಯೋ ಸಾರಂಗ್ ಮೂಲಕ ತ್ಯಾಜ್ಯ ಆಯುವ ಕಾರ್ಮಿಕರಿಗೆ ಮಾಹಿತಿ ಶಿಬಿರ

ರೇಡಿಯೋ ಸಾರಂಗ್ 107.8 ಎಫ್. ಎಂ ಮಂಗಳೂರು, ಎ. ಬಿ. ಡಿ. ಫೌಂಡೇಶನ್, ಹಸಿರುದಳ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ, ಕಮ್ಯೂನಿಟಿ ರೇಡಿಯೋ ಅಸೋಸಿಯೇಷನ್ ಹಾಗೂ ಯೂನಿಸೆಫ್ ಸಹಯೋಗದಲ್ಲಿ ಮಂಗಳೂರಿನ ಪಚ್ಚನಾಡಿಯ ಸಮುದಾಯ ಭವನದಲ್ಲಿ ತ್ಯಾಜ್ಯ ಆಯುವ ಕಾರ್ಮಿಕರಿಗೆ ಮಲೇರಿಯ ಹಾಗೂ ಕೋವಿಡ್ ನಿಯಂತ್ರಣ ಕುರಿತು ಮಾಹಿತಿ ಶಿಬಿರವನ್ನು ಆಗಸ್ಟ್ 25ರಂದು ಆಯೋಜಿಸಲಾಯಿತು.

ಜಿಲ್ಲಾ ಮಲೇರಿಯಾ ನಿಯಂತ್ರಣ ಕಛೇರಿಯ ಸಿಬ್ಬಂದಿ ಪ್ರದೀಪ್  ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರೇಡಿಯೋ ಸಾರಂಗ್ ವತಿಯಿಂದ ಸೊಳ್ಳೆ ಪ್ರತಿಬಂಧಕ ಬೇವಿನ ಎಣ್ಣೆ ಹಾಗೂ ಮಾಸ್ಕ್ ವಿತರಿಸಲಾಯಿತು. ಹಾಗೂ ಮಲೇರಿಯಾ ನಿಯಂತ್ರಣ ಕಛೇರಿಯ ವತಿಯಿಂದ ಸೊಳ್ಳೆ ಪರದೆ ವಿತರಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿಯನ್ನು ಹಸಿರುದಳ, ಎ. ಬಿ. ಡಿ ಫೌಂಡೇಶನ್ ನ ಸಂಚಾಲಕರಾದ ನಾಗರಾಜ್ ಅಂಚನ್  ವಹಿಸಿದ್ದು, ಅಗತ್ಯ ಮಾಹಿತಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಮುಂದಾಳು ನಟರಾಜ್ ಪಚ್ಚನಾಡಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಇಲಾಖೆಯ ಸಿಬ್ಬಂದಿಗಳು, ಎ. ಬಿ. ಡಿ. ಫೌಂಡೇಶನ್ ನ ಶೋಭಾ, ರೋಶನಿ ನಿಲಯದ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು, ರೇಡಿಯೋ ಸಾರಂಗ್ ನ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

- ಶ್ವೇತಾ ಇಂದಾಜೆ, ರೇಡಿಯೋ ಸಾರಂಗ್