ಯಕ್ಷಗಾನದಸಾಂಗತ್ಯ  ಯಕ್ಷಪ್ರೇಮಿಯಾಗಿಸಿತು:  ಮಧುಸೂಧನ  ಅಲೆವೂರಾಯ

 
"ನನ್ನ ತಂದೆ, ಅಣ್ಣಂದಿರು ಎಲ್ಲರೂ ಯಕ್ಷಗಾನ ಆರಾಧಕರು. ಒಂದು ರೀತಿಯಲ್ಲಿ ನಮ್ಮ ಮನೆ  ಯಕ್ಷದೇಗುಲವೆಂದರೂ  ತಪ್ಪಿಲ್ಲ. ಇದು ನನ್ನನ್ನು ಯಕ್ಷಗಾನದತ್ತ ಆಕರ್ಷಿಸಿತು," ಎಂದು ಛಾಯಾಗ್ರಾಹಕ  ಹಿಮ್ಮೇಳ ವಾಧಕ  ಮಧುಸೂಧನ  ಅಲೆವೂರಾಯ   ಅವರು ನುಡಿದರು. 
 
ಅವರು ಅಕ್ಟೋಬರ್ 27ರಂದು  ನಡೆದ  'ಹೃದಯರಾಗ' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ  ಮಾತನಾಡಿದರು.
 
 
 
 
 
ಕಾಸರಗೋಡು ತಾಲೂಕಿನ ವರ್ಕಾಡಿ ಊರಿನವರಾದ  ಇವರು ಕಳೆದ  30 ವರ್ಷಗಳಿಂದ ಯಕ್ಷರಂಗದಲ್ಲಿದ್ದಾರೆ. ಮ್ರದಂಗ, ಚೆಂಡೆ, ಚಕ್ರತಾಳ ನುಡಿಸುತ್ತಾರೆ. ಇದಲ್ಲದೆ  ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. ಇವರಲ್ಲಿ  ಹಲವಾರು  ಯಕ್ಷಗಾನ ಕಲಾವಿದರ  ಅಪರೂಪದ  ಚಿತ್ರಸಂಗ್ರಹವಿದೆ. ಇವರ  'ಮಧುಸೂಧನ ಅಲೆವೂರಾಯ' ಎನ್ನುವ ಯುಟ್ಯೂಬ್ ಛಾನಲಿಗೆ  ಸಂಪರ್ಕಿಸಿದರೆ ಯಕ್ಷ  ಪ್ರಪಂಚವೇ ತೆರೆದುಕೊಳ್ಳುತ್ತದೆ.
 
ಅಲೆವೂರಾಯರ ಬಳಿ ಕಣ್ಮನ  ತಣಿಸುವ ಮೂರುವರೆ ಸಾವಿರಕ್ಕೂ ಹೆಚ್ಚು ಯಕ್ಷಗಾನದ  ಹಳೆ  ಹೊಸದು ಆಡಿಯೋ ವಿಡಿಯೋ ಸಂಗ್ರಹವಿದೆ ಹಾಗೂ  ಈ ಛಾನಲಿಗೆ  39000 ಸಬ್ಸ್ ಕ್ರೈಬರ್ಸ್ ಇದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.
 
ಮಲ್ಪೆ ರಾಮದಾಸ್ ಸಮಗ, ಶೇಣಿ ಗೋಪಾಲಕೃಷ್ಣ ಭಟ್ ಮುಂತಾದ ಹಳೆ  ಯಕ್ಷದಿಗ್ಗಜರ  ಹಾಗೂ ಹಲವೊಂದು ಯಕ್ಷಗಾನಗಳನ್ನು ಲಕ್ಷಾಂತರ ಮಂದಿ  ವೀಕ್ಷಿಸಿ  ಸಂತುಷ್ಟರಾಗಿದ್ದಾರೆ. "ಇದು ಯಕ್ಷರಂಗಕ್ಕೆ ನನ್ನ ಕಿಂಚಿತ್ತ್  ಸೇವೆ," ಎಂದು ದೈನ್ಯತೆಯಿಂದ ನುಡಿದರು.
 
"ನನ್ನ ತಂದೆ, ಹಿರಿಯಣ್ಣ ಯಕ್ಷಪಾಠ ಹೇಳಿ ಹುರಿದುಂಬಿಸಿ ಹಿಮ್ಮೇಳವಾದಕನಾಗಲು  ಪ್ರೇರೇಪಿಸಿದರೆ, ಮತ್ತೊರ್ವ ಅಣ್ಣ ಕೆಮರಾ  ಕೈಗೆ  ಕೊಟ್ಟು ಛಾಯಾಗ್ರಾಹಕನಾಗಲು  ಸಹಕರಿಸಿದರು. ಇದಲ್ಲದೆ ಹಿಮ್ಮೇಳ ವಾದಕನಾಗಲು ಯೋಗ್ಯ ಗುರುಗಳ ಮಾರ್ಗದರ್ಶನ  ನನ್ನ ಪುಟ್ಟ ಸಾಧನೆಗೆ   ಕೈಕನ್ನಡಿಯಾಯಿತು," ಎಂದರು. ಕುಟುಂಬದ ಸಂಘ ಸಂಸ್ಥೆಗಳ  ಪ್ರೋತ್ಸಾಹ ನನಗೆ ಇನ್ನಷ್ಟು ಶಕ್ತಿ ತುಂಬಿದೆ ಎಂದು ನುಡಿದರು.
 
 
 
ಹಲವಾರು  ಕೇಳುಗರು ಕರೆಮಾಡಿ ಮಾತಾನಾಡಿದರು.  ಯಕ್ಷಗಾನಕ್ಕೆ ಸಾರಂಗ್ ನೀಡುವ ಕೊಡುಗೆಯನ್ನು ಪ್ರಶಂಶಿಸಿದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ  ಆನಂದಿಸಿದರು.
 
- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್