ನೆಹರು ಮೈದಾನದಿಂದ ಕನ್ನಡ ರಾಜ್ಯೋತ್ಸವದ ನೇರ ಪ್ರಸಾರ   

ದಕ್ಷಣ ಕನ್ನಡ ಜಿಲ್ಲಾಡಳಿತ ವತಿಯಿಂದ ನೆಹರು ಮೈದಾನದಲ್ಲಿ  ನವೆಂಬರ್ 1ರಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ನೇರ ಪ್ರಸಾರ ಕಾರ್ಯಕ್ರಮವು ರೇಡಿಯೋ ಸಾರಂಗ್ ವತಿಯಿಂದ ಹಮ್ಮಿಕೊಳ್ಳಲಾಯಿತು. ನಾಡಗೀತೆ, ರೈತಗೀತೆಯಿಂದ ಈ ಕಾರ್ಯಕ್ರಮವು ಆರಂಭವಾಯಿತು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಗೌರವ ವಂದನೆಯೊಂದಿಗೆ ಧ್ವಜಾರೋಹಣ ನಡೆಸಿ ಕನ್ನಡ ಭಾಷೆಯ ಬಗ್ಗೆ, ಸರಕಾರದ  ಯೋಜನೆಗಳ ಬಗ್ಗೆ ಆಡಿದ ಮಾತುಗಳನ್ನು ಪ್ರಸಾರಿಸಲಾಯಿತು. ಸಚಿವರ ಸಂದೇಶದ ನಂತರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.