“ದಕ್ಷಿಣ ಕನ್ನಡ ಜಿಲ್ಲೆಯ ನೀರು ಪರೀಕ್ಷಣಾ ಕೇಂದ್ರ ಎನ್ ಎ ಬಿ ಎಲ್ ಮಾನ್ಯತೆ ಪಡೆದ ಕರ್ನಾಟಕದ ಮೊದಲ ಪರೀಕ್ಷಣೆ ಕೇಂದ್ರವಾಗಿದ್ದು ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ,” ಎಂದು ನವೆಂಬರ್ 21 ರಂದು ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನರೇಂದ್ರಬಾಬು ತಿಳಿಸಿದರು.