ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಲಯನ್ ವಸಂತ್ ಕುಮಾರ್ ಶೆಟ್ಟಿ ಜುಲಾಯಿ 23 ರಂದು ರೇಡಿಯೋ ಸಂಜೆ ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದರು. ಲಯನ್ಸ್ ಕ್ಲಬ್ ಬೆಳೆದು ಬಂದ ದಾರಿ, ಜಿಲ್ಲೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಲಯನ್ಸ್ ಬಗ್ಗೆ ಮಾಹಿತಿ ನೀಡುತ್ತಾ, "ಲಯನ್ ಎಂಬುದು ಪರೋಪಕಾರಕ್ಕಾಗಿ ಇರುವ ಅಂತರಾಷ್ಟ್ರೀಯ ಸಂಘಟನೆ. ನೂರಾರು ದೇಶಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಹೇಗೆ ಒಂದು ಸಿಂಹ ನಡೆಯುತ್ತಾ ಬಂದ ದಾರಿಯನ್ನು ಒಮ್ಮೆ ಹಿಂದಿರುಗಿ ನೋಡುತ್ತಾ, ಅದೇ ರೀತಿ ಈ ಸಂಸ್ಥೆ ನಿಷ್ಟೆಯಿಂದ ಪ್ರತಿ ಕಾರ್ಯವನ್ನು ಅವಲೋಕನ ಮಾಡುತ್ತದೆ," ಎಂದರು.
ತಾನು ಗವರ್ನರ್ ಆಗಿ ನೆರವೇರಿಸಿದ ಅಥವಾ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಕೂಡ ವಸಂತ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಅವರಲ್ಲಿ ಕೆಲವು ಹೀಗಿವೆ:
ಕಾರ್ಯಕ್ರಮದಲ್ಲಿ ಅನೇಕರು ಕರೆ ಮಾಡಿ ತಮ್ಮ ಅನಿಸಿಕೆ ಸಲಹೆ ಸೂಚನೆಗಳನ್ನು ನೀಡಿದರು. RJ ಅಭಿಷೇಕ್ ಕಾರ್ಯಕ್ರಮ ನಡೆಸಿಕೊಟ್ಟರು.