ಡಿಸೆಂಬರ್ 9 ರಂದು ರೇಡಿಯೋ ಸಂಜೆಯಲ್ಲಿ ಮಂಗಳೂರು ಎಸ್ ಡಿ ಎಂ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರಾನಾಥ್ ಭಾಗವಹಿಸಿದರು. ಸಾಮಾನ್ಯ ಜನರಿಗೆ ಕಾನೂನಿನ ಅರಿವಿನ ಅಗತ್ಯತೆಗಳು ಹಾಗೂ ಕಾನೂನು ವ್ಯಾಸಂಗಕ್ಕೆ ಇರುವಂತಹ ವಿವಿಧ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು.
ಕಾನೂನು ಗೊತ್ತಿಲ್ಲ ಎಂಬ ಕಾರಣಕ್ಕಾಗಿ ಯಾವುದೇ ಅಪರಾಧಿಯು ನಿರಪರಾಧಿ ಆಗಲಾರ. ಕಾನೂನಿನ ಅಜ್ಞಾನ ಅಕ್ಷಮ್ಯ ಅಪರಾಧ. ಹೀಗಿರುವಾಗ ಸಾಮಾನ್ಯವಾದ ಕಾನೂನಿನ ಜ್ಞಾನ ನಮಗೆಲ್ಲರಿಗೂ ಅಗತ್ಯ ಎನ್ನುವುದನ್ನು ತಿಳಿಸಿಕೊಟ್ಟರು.
ಕಾನೂನನ್ನು ಕಲಿತ ವಿದ್ಯಾರ್ಥಿಗಳಿಗೆ ಇರುವಂತಹ ಬೇರೆ ಬೇರೆ ರೀತಿಯ ಅವಕಾಶಗಳ ಬಗ್ಗೆ ತಿಳಿಸಿಕೊಡುವುದರ ಜೊತೆಗೆ ವಕೀಲಿವೃತ್ತಿ ಅದೊಂದು ನಿರಂತರವಾದ ಕಲಿಕೆ. ಪ್ರಸ್ತುತ ಸನ್ನಿವೇಶದಲ್ಲಿ ಭಾರತದಲ್ಲಿ ಆಗುತ್ತಿರುವಂತ ಬೇರೆ ಬೇರೆ ಕಾನೂನಾತ್ಮಕ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಎಸ್ ಡಿ ಎಂ ಕಾಲೇಜು ಮಂಗಳೂರಿನಲ್ಲಿ ಇರುವಂತಹ ವಿವಿಧ ರೀತಿಯ ಕಾನೂನು ವ್ಯಾಸಂಗದ ಬಗ್ಗೆ ಮಾಹಿತಿಯನ್ನು ಕೊಡುವುದರ ಜೊತೆಗೆ ಕಾನೂನು ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಿದರು. ಒಂದು ಗಂಟೆಗಳ ಕಾಲ ಪ್ರಸಾರಗೊಂಡ ನೇರಪ್ರಸಾರ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಕೂಡ ಸಮರ್ಥವಾದ ಉತ್ತರವನ್ನು ನೀಡಿದರು.
- ಅಭಿಷೇಕ್ ಶೆಟ್ಟ, ರೇಡಿಯೋ ಸಾರಂಗ್