ಟಿ.ವಿ.ಯಿಂದ ನಟನೆ ಕಲಿತೆ: ರೇಖಾ ರಂಜಿತ್ ಕದ್ರಿ

ವಿವಿದ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ವೀಕ್ಷಿಸುತಿದ್ದ ನನ್ನನ್ನು ಮನೆಯ ಟಿ.ವಿ. ಕಲಾವಿದೆಯಾಗಿ ರೂಪಿಸಿತು, ಎಂದು ರಂಗಭೂಮಿ ಕಲಾವಿದೆ ರೇಖಾ ರಂಜಿತ್ ಕದ್ರಿ ನುಡಿದರು. 

ಅವರು ಜೂನ್ 14ರಂದು ಬುಧವಾರ  ರೇಡಿಯೋ ಸಾರಂಗ್'ನಲ್ಲಿ ನಡೆದ ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತಾನಾಡಿದರು. 

ಕದ್ರಿ ದೇವಸ್ಥಾನದಲ್ಲಿ ನ್ರತ್ಯ ಪ್ರದರ್ಶನಕ್ಕೆ ಸಿಕ್ಕಿದ ಅವಕಾಶ, ಯಕ್ಷಗಾನ, ಸಂಗೀತ ಮುಂತಾದ ಕಲಾಪ್ರಕಾರಗಳಲ್ಲಿ ಬೆಳೆಸಿತು. ಕಳೆದ 9 ವರ್ಷಗಳಿಂದ ಕಲಾ ಸೇವೆಗೈಯುತ್ತಿರುವ ನನಗೆ ಪ್ರೋತ್ಸಾಹ  ನೀಡಿದ ಮನೆಯವರ, ನವೋದಯ ಮಹಿಳಾ ಮಂಡಳಿ, ಸೋಮನಾಥ ಕಲಾ ಮಂದಿರದವರು ನೀಡಿದ ಸಹಕಾರ ನೆನೆದ ಇವರು ಉದಯೋನ್ಮುಖ ಪ್ರತಿಭೆಗಳಿಗೆ ಕಲಿಸುತ್ತಾ, ವೇದಿಕೆ ಕಲ್ಪಿಸುತ್ತಾ ಅವರ ಬೆಳವಣಿಗೆಯಲ್ಲಿ ಸಂತಸಪಡುತ್ತಿರುವೆ, ಎಂದರು. ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಾ ಹವ್ಯಾಸಿಯಾಗಿ ಕಲಾಸಾಗಂತ್ಯದಲ್ಲಿರುವೆ, ಎಂದು ತಿಳಿಸಿದರು.

ಹಾಡು,ನಾಟಕದ ಸಂಭಾಷಣೆ ಮೂಲಕ ಮನ ರಂಜಿಸಿದ ಇವರು ಕೇಳುಗರ ಕರೆಗಳಿಗೆ ಉತ್ತರಿಸಿದರು.

- ಎಡ್ವರ್ಡ್ ಲೋಬೊ, ರೇಡಿಯೋ ಸಾರಂಗ್