ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಿಂದ ಕಾರ್ಯಾಚರಿಸುತ್ತಿರುವ ಸಮುದಾಯ ಬಾನುಲಿ ರೇಡಿಯೋ ಸಾರಂಗ್ 107.8 FM ನ ನೂತನ ನಿರ್ದೇಶಕರಾಗಿ ಫಾ. ವಿಲಿಯಂ ಮಾರ್ಸೆಲ್ ರೋಡ್ರಿಗಸ್ ಎಸ್ ಜೆ ಅವರು ನಿಯುಕ್ತಿ ಹೊಂದಿದರು.
ಈ ಹಿಂದೆ ಡಾ.ಫಾ. ಮೆಲ್ವಿನ್ ಪಿಂಟೋ ಎಸ್ ಜೆ ಅವರು 2017 ರಿಂದ ರೇಡಿಯೋ ಸಾರಂಗ್ ನ ನಿರ್ದೇಶಕರಾಗಿದ್ದರು. ಇವರಿಗೆ ರೇಡಿಯೋ ಸಾರಂಗ್ ನ ಪರವಾಗಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಫಾ. ವಿಲಿಯಂ ಮಾರ್ಸೆಲ್ ಅವರು ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಮಾಧ್ಯಮ ಸಂವಹನಾ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಹಾಗೆಯೇ ಈ ಹಿಂದೆ ರೇಡಿಯೋ ಸಾರಂಗ್ ನ ನಿರ್ದೇಶಕರಾಗಿದ್ದ ಅನುಭವವೂ ಇದೆ.
ಈ ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ವರಿಷ್ಟರಾದ ರೆ. ಫಾ. ಮೆಲ್ವಿನ್ ಜೆ ಪಿಂಟೋ ಎಸ್ ಜೆ, ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಫಾ. ಪ್ರವೀಣ್ ಮಾರ್ಟಿಸ್ ಎಸ್ ಜೆ, ಹಣಕಾಸು ಅಧಿಕಾರಿ ಫಾ. ವಿನ್ಸೆಂಟ್ ಪಿಂಟೋ ಎಸ್ ಜೆ ಹಾಗೂ ರಿಜಿಸ್ಟ್ರಾರ್ ಅಲ್ವಿನ್ ಡೇ’ಸಾ, ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಹಾಗೂ ರಾಣಿ ಅಬ್ಬಕ್ಕ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಹಾಗೂ ರೇಡಿಯೋ ಸಾರಂಗ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ.ಫಾ.ಮೆಲ್ವಿನ್ ಪಿಂಟೋ ಅವರು AIMIT ನಿರ್ದೇಶಕರಾಗಿ ಹಾಗೂ ಇತರ ಜವಾಬ್ದಾರಿಗಳಲ್ಲಿ ಮುಂದುವರಿದಿದ್ದಾರೆ.