ರೇಡಿಯೋ ಸಾರಂಗ್ 107.8FM ಮಂಗಳೂರು, ಪಂಚಾಯತ್ ರಾಜ್ ಸಚಿವಾಲಯ ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಸಹಯೋಗದಲ್ಲಿ ‘ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ’ ಎಂಬ ರೇಡಿಯೋ ಜಾಗೃತಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬಡತನ ಮುಕ್ತ ಗ್ರಾಮಗಳು ಈ ಕುರಿತಾದ ಕಾರ್ಯಕ್ರಮ ಅಕ್ಟೋಬರ್ 28 ರಂದು ಬೆಳಿಗ್ಗೆ 9 ಗಂಟೆಗೆ ಹಾಗೂ ಅಕ್ಟೋಬರ್ 30 ರಂದು ಸಂಜೆ 7 ಗಂಟೆಗೆ ಮರುಪ್ರಸಾರವಾಗಲಿದೆ.
ಈ ಕಾರ್ಯಕ್ರಮದಲ್ಲಿ ಸುಸ್ಥಿರ ಗ್ರಾಮಪಂಚಾಯತಿಗಳನ್ನು ರೂಪಿಸುವ ವಿಧಾನ, ಸ್ಥಳೀಯ ಆದಾಯ ಮೂಲಗಳ ಅಭಿವೃದ್ಧಿ, ಎದುರಾಗುವ ಸವಾಲುಗಳು ಮತ್ತು ಪರಿಹಾರ ಮಾರ್ಗಗಳ ಕುರಿತಾದ ಮಾಹಿತಿ ಪ್ರಸಾರವಾಗಲಿದೆ.