ಭಿನ್ನ ಸಾಮರ್ಥ್ಯದ ಮಕ್ಕಳ ಬದುಕಿಗೆ ಸರಕಾರ ಆಸರೆಯಾಗಬೇಕಿದೆ – ಡಾ. ವಸಂತ್ ಕುಮಾರ್ ಶೆಟ್ಟಿ
ನನಗೆ ಇಂತಹ ಮಗು ಯಾಕೆ ಹುಟ್ಟಿತ್ತು? ಈ ಮಗುವಿಗೆ ನನ್ನ ನಂತರ ಮುಂದೆ ಯಾರು? ಈ ಎರಡು ಪ್ರಮುಖ ಪ್ರಶ್ನೆಗಳು ಜೀವನ ಪೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಪೋಷಕರನ್ನು ಕಾಡುತ್ತದೆ. ಇಂತಹ ಸಂದರ್ಭದಲ್ಲಿ ವಿಶೇಷ ಮಕ್ಕಳ ಶಾಲೆಗಳು ಪೋಷಕರಿಗೆ ಜೊತೆಯಾಗಿ ನಿಲ್ಲಲು ಸಹಕರಿಸುತ್ತದೆ ಎಂದು ಮಂಗಳೂರಿನ ಸಾನಿಧ್ಯ ವಸತಿಯುತ ಶಾಲೆಯ ಆಡಳಿತಾಧಿಕಾರಿಯಾಗಿರುವ ಡಾ. ವಸಂತ್ ಕುಮಾರ್ ಶೆಟ್ಟಿ ಹೇಳುತ್ತಾರೆ.
ಭಿನ್ನ ಸಾಮರ್ಥ್ಯದ ಮಕ್ಕಳಾಗಲಿ ಅವರನ್ನು ನೋಡಿಕೊಳ್ಳುವ ಶಿಕ್ಷಕರಿಗಾಗಲಿ ಸರಕಾರದಿಂದ ಯಾವುದೇ ದೊಡ್ದ ರೀತಿಯ ಸಹಕಾರ ಸಿಗುತ್ತಿಲ್ಲ ಅವರ ಭವಿಷ್ಯದ ಬಗ್ಗೆ ಆಲೋಚಿಸಿದರೆ ಅತಂತ್ರತೆ ಎದ್ದು ಕಾಣುತ್ತದೆ. ಸರಕಾರ ಈ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ ವಿಶೇಷ ಯೋಜನೆಗಳನ್ನು ಅನುದಾನಗಳನ್ನು ಮೀಸಲಿಡುವುದರ ಮೂಲಕ ವಿಶೇಷ ಮಕ್ಕಳ ಶ್ರೇಯೋಭಿವೃದ್ದಿಗೆ ಗಮನಹರಿಸಬೇಕಾಗಿದೆ ಎಂದು ತನ್ನ 46 ವರ್ಷಗಳ ಅನುಭವವನ್ನು ಹಂಚಿಕೊಂಡ ವಸಂತ್ ಶೆಟ್ಟಿಯವರು ಅನೇಕ ಕೇಳುಗರ ಕರೆಗಳಿಗೆ ಉತ್ತರವನ್ನು ನೀಡಿದರು ಮತ್ತು ತಮ್ಮ ಮುಂದಿನ ಯೋಜನೆಗಳನ್ನು ತಮ್ಮ ಕೇಳುಗರೊಂದಿಗೆ ಹಂಚಿಕೊಂಡರು.