ಹಲೋ ವೆನ್ಲಾಕ್ 100ನೇ ಸಂಚಿಕೆ

ರೇಡಿಯೋ ಸಾರಂಗ್  ಹಾಗೂ ಸರಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಮೂಡಿ ಬರುತ್ತಿರುವ ಹಲೋ ವೆನ್ಲಾಕ್ ಕಾರ್ಯಕ್ರಮದ 100ನೇ ಸಂಚಿಕೆ ನವೆಂಬರ್ 5ರಂದು ಮೂಡಿಬಂತು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಯಾದ ಡಾ.  ಸದಾಶಿವ ಶಾನ್ಭೋಗ್ ಭಾಗವಹಿಸಿದ್ದರು. 

ನೇರ ಪ್ರಸಾರದಲ್ಲಿ ಅವರು ಸರ್ಕಾರಿ ಆಸ್ಪತ್ರೆಯ ಅನೇಕ ಮಾಹಿತಿಗಳನ್ನು ನೀಡಿದರು ಹಾಗೂ ಕೇಳುಗರ ಅನೇಕ ಗೊಂದಲ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು. ಸರಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಇಂತಹ ಕಾರ್ಯಕ್ರಮಗಳು ಮೂಡಿ ಬರುತ್ತಿರುವುದು ಇದೊಂದು ವಿಶೇಷ ಹಾಗೂ ಅತಿ ವಿರಳ ಎಂದು ಅಭಿಪ್ರಾಯಪಟ್ಟರು. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಿಗೆ ಇರುವಂತಹ ಗೊಂದಲಗಳು, ಬೇರೆ ಬೇರೆ ಸೌಲಭ್ಯಗಳು ಜನರು ಅದರ ಉಪಯೋಗವನ್ನು ಹೇಗೆ ಪಡೆದುಕೊಳ್ಳಬಹುದು ಅನ್ನೋದನ್ನು ಅವರು ಕಾರ್ಯಕ್ರಮದಲ್ಲಿ ವಿವರಿಸಿದರು. ಮುಂದಿನ ದಿನಗಳಲ್ಲಿ ಕೂಡ ಈ ಕಾರ್ಯಕ್ರಮ ಹೀಗೆ ಮುಂದುವರಿಯಲಿದೆ, ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೇಳುಗರು ಕರೆ ಮಾಡಿ 100ನೇ ಸಂಚಿಕೆಗೆ ಶುಭ ಹಾರೈಸಿದರು.
 
- ಅಭಿಷೇಕ್ ಶೆಟ್ಟಿ, ರೇಡಿಯೋ ಸಾರಂಗ್