ಜುಲಾಯಿ 8ರ ಹಲೋ ವೆನ್ಲಾಕ್ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞೆ ಡಾ ಶಿಲ್ಪ ಹೆಗ್ಡೆಯವರು ಭಾಗವಹಿಸಿದ್ದರು. ಮಕ್ಕಳಲ್ಲಿ ಕಂಡುಬರುವ ಸ್ವಲೀನತೆಯ ಬಗ್ಗೆ ಇವರು ಮಾತನಾಡಿದರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆಟಿಸಂ ಸ್ವಲೀನತೆ ಅನ್ನುವಂಥದ್ದು ರೋಗವಲ್ಲ ಅದೊಂದು ನ್ಯೂನ್ಯತೆ ಅದನ್ನು ಪೋಷಕರು ಸರಿಯಾದಂತಹ ಸಮಯದಲ್ಲಿ ಪತ್ತೆಹಚ್ಚಿ ಮಕ್ಕಳಿಗೆ ಸರಿಯಾದ ರೀತಿಯ ಚಿಕಿತ್ಸೆಯನ್ನು ನೀಡಿದರೆ ಇದು ಭವಿಷ್ಯಕ್ಕೆ ಗಂಭೀರವಾಗಿ ಪರಿಗಣಿಸುವುದಿಲ್ಲ, ಎಂದರು.
ಸಮಸ್ಯೆಗಳನ್ನು ಹೊಂದಿದ್ದ ಅದೆಷ್ಟು ಮಕ್ಕಳು ದೊಡ್ಡವರಾಗಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹಾಗೂ ವಿಶ್ವವಿಖ್ಯಾತಿಯನ್ನು ಗಳಿಸಿದವರು ಇದ್ದಾರೆ. ಸ್ವಲೀನತೆಯ ಕಾರಣದಿಂದಾಗಿ ಬೇರೆ ಬೇರೆ ರೀತಿಯ ಸಮಸ್ಯೆಗಳು ಮಕ್ಕಳಲ್ಲಿ ಕಂಡುಬರಬಹುದು. ಇದನ್ನು ಪತ್ತೆಹಚ್ಚವಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ಇಂತಹ ಮಕ್ಕಳ ಆರೈಕೆಗಾಗಿ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೂಡ ತಜ್ಞ ವೈದ್ಯರಿದ್ದಾರೆ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು, ಎಂದು ಅವರು ತಿಳಿಸಿದರು.
ಕೇಳುಗರ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು. ಅಭಿಷೇಕ್ ಶೆಟ್ಟಿ ಸಂದರ್ಶನ ನಡೆಸಿಕೊಟ್ಟರು.
- ಆಭಿಷೇಕ್ ಶೆಟ್ಟಿ, ರೇಡಿಯೋ ಸಾರಂಗ್