ವಾಯು ಮಾಲಿನ್ಯವನ್ನು ನಿಯಂತ್ರಿಸಿದಲ್ಲಿ ಅಸ್ತಮಾ ಕಾಯಿಲೆಯನ್ನು ಆದಷ್ಟು ತಡೆಗಟ್ಟಬಹುದು, ಎಂದು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ತಜ್ಞರಾದ ಡಾ. ಆಲಂ ನವಾಝ್ ಅವರು ತಿಳಿಸಿದರು. ಇವರು ಜನವರಿ 20 ಶುಕ್ರವಾರ ಹಲೋ ವೆನ್ಲಾಕ್ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿ ಮಾತನಾಡಿದರು.
'ಅಸ್ತಮಾ' ಎಂಬುದು ಶ್ವಾಸಕೋಶಕ್ಕೆ ಸಂಬಂಧಪಟ್ಟು ಬರುವ ಖಾಯಿಲೆ. ಇದು ಹಲವಾರು ರೂಪಗಳಲ್ಲಿ ಬರುತ್ತದೆ ಮೊದಲನೆಯದಾಗಿ ವಂಶ ಪಾರಂಪರ್ಯವಾಗಿ ಬರಬಹುದು ಮತ್ತು ಕೆಲವೊಂದು ಅಲರ್ಜಿಯಿಂದ ಬರಬಹುದು. ವಾಯು ಮಲಿನಗೊಳ್ಳುದರಿಂದಲೂ ಬರಬಹುದು. ಅದೇ ರೀತಿ ಕೆಲವೊಮ್ಮೆ ಹವಾಮಾನ ಬದಲಾವಣೆಗಳಿಂದಲೂ ಬರಬಹುದು ಮತ್ತು ಕೆಲವು ಆಹಾರ ಕ್ರಮಗಳಿಂದಲೂ ಅಸ್ತಮಾ ಬರಬಹುದು, ಎಂದು ಹೇಳಿದರು.
ಇಷ್ಟೇ ಅಲ್ಲದೆ ಈ ಅಸ್ತಮಾ ಕಾಯಿಲೆ ಹೆಚ್ಚಾಗಿ ಮಕ್ಕಳಲ್ಲಿ ಹಾಗೂ ವೃದ್ಧರಲ್ಲಿ ಕಂಡು ಬರುತ್ತದೆ, ಏಕೆಂದರೆ ಅವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಹಾಗಾಗಿ ಅಸ್ತಮಾ ಅವರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತದೆ, ಎಂದರು.
ಅತಿಯಾದ ಕೆಮ್ಮು, ಏದುಸಿರು ಬಿಡಲು ಕಷ್ಟವಾಗುದು, ತಂಪಾದ ಯಾವುದೇ ವಸ್ತುಗಳನ್ನು ಸೇವಿಸಿದ ತಕ್ಷಣ ಶೀತವಾಗುದು, ರಾತ್ರಿ ಹೊತ್ತಲ್ಲಿ ಮಲಗಲು ಕಷ್ಟವಾಗುದು, ಹೀಗೆ ಅಸ್ತಮಾದ ಹಲವಾರು ಲಕ್ಷಣಗಳ ಬಗ್ಗೆ ವೈದ್ಯರು ಕಾರ್ಯಕ್ರಮದಲ್ಲಿ ವಿವರಿಸುತ್ತಾ ಹೋದರು.
ಅಸ್ತಮಾ ಕಾಯಿಲೆಗೆ ಎಲ್ಲಾ ಕಾಯಿಲೆಗಳಿಗೆ ಇರುವಂತೆ ಚಿಕಿತ್ಸೆ ಇದೆ. ರೋಗದ ತೀವ್ರತೆಯ ಆಧಾರದಲ್ಲಿ ಮಾತ್ರೆಗಳನ್ನು ಅಥವಾ inhalerಗಳನ್ನು ನೀಡಲಾಗುತ್ತದೆ. ಮಾತ್ರೆಗಳಿಗಿಂತಲೂ inhalerಗಳು ತುಂಬಾ ಪ್ರಯೋಜನಕಾರಿ ಎಂಬುದನ್ನು ಈ ಕಾರ್ಯಕ್ರಮದಲ್ಲಿ ತಿಳಿಸಿದರು. ಆ ಮಾತುಗಳನ್ನೇ ಮುಂದುವರಿಸುತ್ತ inhalerಗಳ ಬಗ್ಗೆ ಜನರಲ್ಲಿ ಸಾಕಷ್ಟು ತಪ್ಪು ಅಭಿಪ್ರಾಯಗಳಿದೆ. ಆದರೆ inhalerಗಳಿಂದ ಈ ಖಾಯಿಲೆಯನ್ನು ಆದಷ್ಟು ಬೇಗ ನಿಯಂತ್ರಿಸಬಹುದು ಮತ್ತು ವೈದ್ಯರ ಸಲಹೆಗಳ ಪ್ರಕಾರ inhaler ಗಳನ್ನು ಬಳಕೆ ಮಾಡಬೇಕು, ಎಂದು ತಿಳಿಸಿದರು. ಈ ಖಾಯಿಲೆ ತೀವ್ರವಾದಲ್ಲಿ ದೇಹದ ಇತರೆ ಭಾಗಗಳಿಗೂ ಪರಿಣಾಮ ಬೀರಬಹುದು, ಎಂದರು. ಮತ್ತು ಖಾಯಿಲೆ ಇದೆ ಎಂದು ತಿಳಿದ ತಕ್ಷಣ ಯಾವುದೇ ರೀತಿಯಲ್ಲೂ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು ಎಂಬ ಕಿವಿ ಮಾತುಗಳನ್ನು ತಿಳಿಸುತ್ತ ಹಲವಾರು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು.
- ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್