'ಮಕ್ಕಳಲ್ಲಿ ಹಲ್ಲಿನ ಶುಚಿತ್ವದ ಬಗ್ಗೆ ಗರ್ಭಿಣಿ ಇರುವಾಗಲೇ ಜಾಗರೂಕತೆ ವಹಿಸಬೇಕು. ತಾಯಿ ಸೇವಿಸುವ ಆಹಾರವು ಮಗುವಿನ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆ' ಎಂದು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ದಂತ ಚಿಕಿತ್ಸಾ ತಜ್ಞರಾದ ಡಾ. ಅಂಬಿಕಾ ಅವರು ಜೂನ್ 30 ರಂದು ಹಲೋ ವೆನ್ಲಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಕ್ಕಳಲ್ಲಿ ದಂತ ಕುಳಿ ಎಂಬ ಹಲ್ಲಿನ ಸಮಸ್ಯೆ ಹೇಗೆ ಬರುತ್ತದೆಂದರೆ ಹಾಲು ಕುಡಿಯುವ ಸಮಯದಲ್ಲಿ ಮಗುವಿನ ಬಾಯಲ್ಲಿ ಹಾಲಿನ ಅಂಶ ಉಳಿದಲ್ಲಿ ಅದು ಹಲ್ಲನ್ನು ಕೊರೆಯುತ್ತಾ ಹೋಗಬಹುದು ಏಕೆಂದರೆ ತಾಯಿಯ ಹಾಲಿನಲ್ಲಿ ಸಕ್ಕರೆಯಂಶ ಜಾಸ್ತಿ ಇರುತ್ತದೆ. ಇದು ಹಲ್ಲಿನ ಸಂದಿಯಲ್ಲಿ ಉಳಿದು ಕಾಲ ಕ್ರಮೇಣವಾಗಿ ದಂತ ಕುಳಿಯಾಗಿ ಪರಿವರ್ತನೆ ಆಗಬಹುದು. ಬಾಯಲ್ಲಿ ಯಾವಾಗ ಆಸಿಡ್ ಅಂಶ ಶುರುವಾಗುತ್ತದೆ ಆಗ ದಂತ ಕುಳಿ ಸಮಸ್ಯೆ ಬರುತ್ತದೆ. ಇಷ್ಟು ಮಾತ್ರವಲ್ಲದೇ ಅನುವಂಶೀಯವಾಗಿಯೂ ಮಕ್ಕಳಲ್ಲಿ ಹಲ್ಲಿನ ಸಮಸ್ಯೆ ಬರಬಹುದು ಹಾಗೂ ಹಲ್ಲು ತುಂಡಾಗುವುದು ಮತ್ತು ಹಾಲು ಹಲ್ಲು ಬೀಳುವ ಸಮಯದಲ್ಲಿ ತೆಗೆಯದೇ ಇದ್ದಲ್ಲಿ ಅದು ವಕ್ರ ದಂತವಾಗಿ ಮಾರ್ಪಟ್ಟು ಹೀಗೆ ಹಲ್ಲಿನ ಹಲವಾರು ಸಮಸ್ಯೆಗಳು ಬರಬಹುದು ಎಂದು ವೈದ್ಯರು ತಿಳಿಸಿದರು.
ಮಗುವಿಗೆ 2 ವರುಷದವರೆಗೆ ಶುದ್ಧ ನೀರಿನಲ್ಲಿ ಹಲ್ಲನ್ನು ತೊಳೆಯಬಹುದು. ದೊಡ್ಡವರು ಬಳಸುವ ಪೇಸ್ಟ್ ನಲ್ಲಿ ಫ್ಲೋರೈಡ್ ಅಂಶ ಜಾಸ್ತಿ ಇದ್ದು, ಇದು ಮಕ್ಕಳ ಹಲ್ಲಿನ ಅರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಅದನ್ನು ಮಕ್ಕಳಿಗೆ ನೀಡಬಾರದು. 3 ವರುಷದ ನಂತರ ಫ್ಲೋರೈಡ್ ಯುಕ್ತ ಮಕ್ಕಳಿಗೆಂದು ತಯಾರಿಸಿರುವ ಪೇಸ್ಟ್ ಅನ್ನು ನೀಡಬಹುದು ಎಂದರು.
ಇವರು ಚಿಕಿತ್ಸೆಯ ಬಗ್ಗೆ ಮಾತನಾಡುತ್ತಾ ಹಲ್ಲಿನ ಮೇಲಿನ ಕಲೆ ಮತ್ತು ಹಲ್ಲಿನ ಮೇಲಿನ ದಪ್ಪ ಪದರದಿಂದ ವಸಡಿಗೆ ತೊಂದರೆಯಾಗುತ್ತದೆ. Iron tonic ಸೇವಿಸಿದ ಮಕ್ಕಳಲ್ಲಿ ಕಪ್ಪಾದ ಹಲ್ಲು ಕಂಡು ಬರಬಹುದು ಇದನ್ನು cleaning ಮಾಡಿಸಬಹುದಲ್ಲದೇ, ದಂತ ಕುಳಿ ಸಮಸ್ಯೆಗೆ clean ಮಾಡಿ filling ಮಾಡಿಸಬೇಕು. ಹಲ್ಲು ಮುಂದೆ ಬಂದಿರುವ ಮಕ್ಕಳಿಗೆ clipping ಹಾಕಿಸುವ ಮೂಲಕ ಚಿಕಿತ್ಸೆಕೊಡಬಹುದು ಎಂದು ಅವರು ತಿಳಿಸಿ, ಹಲವಾರು ಕೇಳುಗರ ಪ್ರಶ್ನೆಗಳಿಗೆ ಡಾ. ಅಂಬಿಕಾ ಅವರು ಉತ್ತರಿಸಿದರು.
- RJ ಬಿಂದಿಯಾ ಕುಲಾಲ್, ರೇಡಿಯೋ ಸಾರಂಗ್