ಮಾರ್ಚ್ 10: ಈ ವಾರದ ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಡಾ. ಅರ್ಚಿತ್ ಬೋಳೂರ್ ಅವರು ಸಾಮಾನ್ಯ ಜ್ವರದ ಕುರಿತು ವಿವರಣೆ ನೀಡಿದರು. ಇತ್ತೀಚಿಗೆ ಕಂಡುಬರುವ ಹವಾಮಾನ ಬದಲಾವಣೆ ಮತ್ತು ಸೆಕೆಗಾಲದಲ್ಲಿ ಈ ಸಾಮಾನ್ಯ ಜ್ವರ ಕಾಣಿಸಿಕೊಳ್ಳುತ್ತದೆ, ಎಂದು ಅವರು ತಿಳಿಸಿದರು. ಸಾಮಾನ್ಯ ಜ್ವರ ಬಂದರೂ ನಮಗೆ ನಾವು ಡಾಕ್ಟರ್ ಆಗಬಾರದು ಎಂದು ಕಿವಿಮಾತನ್ನು ಹೇಳಿದರು.
ಸಾಮಾನ್ಯ ಜ್ವರ ನಮ್ಮ ದೇಹವು ನೀಡುವ ಸೂಚನೆ ಅಥವಾ ಲಕ್ಷಣ ಆಗಿದೆ. ಇದು ಬೇರೆ ಬೇರೆ ಕಾರಣಗಳಿಂದ ಕಾಣಿಸಿ ಕೊಳ್ಳುತ್ತದೆ. ಕಾಲ ಕಾಲಕ್ಕೆ ಅನುಗುಣವಾಗಿ, ಇತರ ಕಾಯಿಲೆಗಳಿಂದ ಹೀಗೆ ಇದು ಬರಬಹುದು. ಸಾಮಾನ್ಯವಾಗಿ ಜ್ವರ ಮೂರು ವಾರಕ್ಕಿಂತ ಜಾಸ್ತಿ ಬಂದರೆ ಇದು ಗಂಭೀರವಾದ ಕಾರಣಗಳಿಂದ ಬರಬಹುದು ಎಂದರು.
ವೈರಲ್ ಅಥವಾ ಪ್ಲೂ ವೈರಸ್ ಅಥವಾ ಬ್ಯಾಕ್ಟೀರಿಯಾಗಳಿಂದ ಬರಬಹುದು. ಇದರಲ್ಲಿ A, B ಮತ್ತು C ಈ ರೀತಿಯಾಗಿ ಕಾಣಿಸಿಕೊಳ್ಳಬಹುದು. ಇದು ಶ್ವಾಸಕೋಶದ ಮೇಲೆ ಹಾನಿಯುಂಟುಮಾಡುತ್ತದೆ. ಹಾಗಾಗಿ, ಕೆಲವೊಮ್ಮೆ ಮಕ್ಕಳು ಹಾಗೂ ಹಿರಿಯ ನಾಗರಿಕರಲ್ಲಿ ಇದು ಸಮಸ್ಯೆ ಉಂಟುಮಾಡಬಹುದು, ಎಂದರು.
ಸಾಮಾನ್ಯವಾಗಿ ಈ ಜ್ವರ ಕೆಮ್ಮು, ಶೀತ ಮತ್ತು ತಲೆನೋವು ಈ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ ಕೆಂಗಣ್ಣು ಕೂಡ ಈ ಸಾಮಾನ್ಯ ಜ್ವರದ ಲಕ್ಷಣವಾಗಿದೆ.
ಈ ಬಾರಿಯ H3N2 ದೀರ್ಘವಾಗಿ ಕಾಣಿಸಿ ಸುಮಾರು ಏಳು ದಿನವರೆಗೆ ಇದ್ದು, ನಿಶಕ್ತಿಗೆ ಕಾರಣವಾಗುತ್ತದೆ. ಕೆಲವರಲ್ಲಿ ಹಿಂದಿನ ಕೋವಿಡ್ ಲಕ್ಷಣಗಳು ಕೂಡ ಇವೆ.
ಎಲ್ಲಾ ವೈರಲ್ ಜ್ವರಗಳು ಬೇಸಿಗೆ ಕಾಲದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಇದು ಮನೆ ಮನೆಗೆ ತಲುಪುತ್ತದೆ. ಇಲ್ಲಿ ವೈದ್ಯರ ಸಲಹೆ ಕೇಳದೆ ಯಾವುದೇ ಎಂಟಿ ಬಯಾಟಿಕ್ಸ್ ತೆಗೆದುಕೊಳ್ಳಬಾರದು, ಎಂದು ಸಲಹೆ ನೀಡಿದರು.
ಆದಷ್ಟು ಸಾಮಾನ್ಯ ಅಂತರ, ಮಾಸ್ಕ್, ಕೈಗಳ ಶುಚಿ ಕಾಪಾಡಿ ಈ ಜ್ವರ ಹರಡದಂತೆ ಜಾಗ್ರತೆ ವಹಿಸಬೇಕು, ಎಂದರು.
ಹಲವಾರು ಕೇಳುಗರು ಕರೆ ಮಾಡಿ ಪ್ರಶ್ನೆ ಕೇಳಿದರು.
- ರೋಶನ್ ಕ್ರಾಸ್ತಾ, ರೇಡಿಯೋ ಸಾರಂಗ್