Dr. Krishna Prasad: ಪ್ಲಾಸ್ಟಿಕ್ ಸರ್ಜರಿ ಬಗೆಗಿನ ಅಪ ನಂಬಿಕೆಗಳನ್ನು ಹೋಗಲಾಡಿಸಬೇಕಿದೆ

ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಖ್ಯಾತ ಪ್ಲಾಸ್ಟಿಕ್ ಸರ್ಜರಿ ತಜ್ಞ ಡಾಕ್ಟರ್ ಕೃಷ್ಣ ಪ್ರಸಾದ್ ಶೆಟ್ಟಿ ಭಾಗವಹಿಸಿದರು. ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಜನಸಾಮಾನ್ಯರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ ಇದು ಕೇವಲ  ಸೌಂದರ್ಯಕ್ಕೆ ಸೀಮಿತವಾಗಿರುವ ಚಿಕಿತ್ಸೆ ಯಾಗಿರದೆ ಸಾಮಾನ್ಯ ಅವಘಡಗಳಿಂದ ಆಗುವ ಅದೆಷ್ಟೋ ದೈಹಿಕ ತೊಂದರೆಗಳಿಗೆ ಪ್ಲಾಸ್ಟಿಕ್ ಸರ್ಜರಿಯಲ್ಲಿ ಅತ್ಯಂತ ಸೂಕ್ತ ಪರಿಹಾರವಿದೆ. ಪ್ಲಾಸ್ಟಿಕ್ ಸರ್ಜರಿ ವಿಧಾನದಲ್ಲಿ ಇವತ್ತು ವಿಶ್ವದಲ್ಲಿ ಅನೇಕ ದೊಡ್ಡ ದೊಡ್ಡ ರೀತಿಯ ವೈದ್ಯಕೀಯ ಬೆಳವಣಿಗೆಗಳಾಗಿದ್ದು ಆ ಬಗೆಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ಅಗತ್ಯವಿದೆ ಎಂದು ತಿಳಿಸಿದರು. 

ತನ್ನ ವೈದ್ಯಕೀಯ ಜೀವನದಲ್ಲಿ ಆದಂತಹ ಅನುಭವಗಳು  ಮಾಡಿದಂತಹ ಅನೇಕ ಪ್ಲಾಸ್ಟಿಕ್ ಸರ್ಜರಿಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಿದರು. ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಇರುವಂತಹ ವೈದ್ಯಕೀಯ ಸೌಲಭ್ಯಗಳು, ಒಬ್ಬ ವ್ಯಕ್ತಿಗೆ ಪ್ಲಾಸ್ಟಿಕ್ ಸರ್ಜರಿ ಅಗತ್ಯವಾಗುವ ಸಂದರ್ಭಗಳು ಇದೆಲ್ಲದರ ಬಗ್ಗೆ  ಅನೇಕ ಕುತೂಹಲಕಾರಿ ಸಂಗತಿಗಳನ್ನು ಡಾಕ್ಟರ್ ಕೃಷ್ಣಪ್ರಸಾದ್ ತಿಳಿಸಿದರು. ಕೇಳುಗರು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ಅವರ  ಗೊಂದಲಗಳಿಗೆ ಪರಿಹಾರವನ್ನು ನೀಡಿದರು.

-RJ Abhishek Shetty