ಮಾರ್ಚ್ 7 ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಡಾ. ನವೀನ್ ಕುಮಾರ್ ಭಾಗವಹಿಸಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದರು.
ಪ್ರಸ್ತುತ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಆದಂತಹ ಬದಲಾವಣೆಗಳು ಫಲಾನುಭವಿಗಳು ಅದರ ಪ್ರಯೋಜನವನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು, ಅದರ ಜೊತೆಗೆ ಆಭಾ ಕಾರ್ಡ್ ಬಗ್ಗೆ ಇರುವ ಜನರ ಅನೇಕ ಗೊಂದಲಗಳಿಗೆ ಪರಿಹಾರವನ್ನು ನೀಡಿದರು.
ಆಭಾ ಕಾರ್ಡ್ ಅನ್ನುವಂತದ್ದು ಒಂದು ವ್ಯಕ್ತಿಯ ಆರೋಗ್ಯದ ದಾಖಲೀಕರಣವಾಗಿದ್ದು ಆಯುಷ್ಮಾನ್ ಭಾರತ್ ಹಾಗೂ ಆಭಾ ಕಾರ್ಡ್’ನ ಬಗ್ಗೆ ಜನರು ಗೊಂದಲವನ್ನು ಮಾಡಿಕೊಳ್ಳಬಾರದು, ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅನೇಕ ಕೇಳುಗರು ಕರೆಯನ್ನು ಮಾಡಿ ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಂಡರು. ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಯಾವ ರೀತಿಯಲ್ಲಿ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ, ಮತ್ತು ಒಂದು ವೇಳೆ ಸರಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಇಲ್ಲದಿದ್ದ ಸಂದರ್ಭದಲ್ಲಿ ಯಾವ ರೀತಿ ವ್ಯವಸ್ಥೆಗಳನ್ನು ಮಾಡಲಾಗಿದೆ ಅನ್ನುವ ಮಾಹಿತಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಡಾ. ನವೀನ್ ಕುಮಾರ್ ಅವರು ವಿವರಿಸಿದರು.
- ಅಭಿಷೇಕ್ ಶೆಟ್ಟಿ, ರೇಡಿಯೋ ಸಾರಂಗ್