Dr Prakash: ಗ್ಯಾಸ್'ಸ್ಟ್ರೈಟಿಸ್ ಬಗ್ಗೆ ಮಾಹಿತಿ

ಮೇ 19ರಂದು ಹಲೋ ವೆನ್ಲಾಕ್ ಕಾರ್ಯಕ್ರಮದಲ್ಲಿ ಸರಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇಲ್ಲಿನ ಶಸ್ತ್ರಚಿಕಿತ್ಸಾ ತಜ್ಞರಾದ ಡಾ ರಾಜೇಶ್ ಭಾಗವಹಿಸಿದ್ದರು.

ಗ್ಯಾಸ್'ಸ್ಟ್ರೈಟಿಸ್ ಬಗ್ಗೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಿದ ಇವರು ಇಂದು ಸಮಾಜದಲ್ಲಿ ಅತೀ ಹೆಚ್ಚಿನ ರೀತಿಯಲ್ಲಿ ಕಾಡುವ ತೊಂದರೆ ಅದು ಗ್ಯಾಸ್ಟ್ರಿಕ್ ಸಮಸ್ಯೆ. ಮಾನಸಿಕ ಒತ್ತಡಗಳು, ನಮ್ಮ ಆಹಾರ ಪದ್ಧತಿಗಳು ಸೇರಿದಂತೆ ಅನೇಕ ವಿಷಯಗಳು ಗ್ಯಾಸ್'ಸ್ಟೈಟಿಸ್ ಮೇಲೆ ಪ್ರಭಾವವನ್ನು ಬೀರುತ್ತವೆ. ಇದರಿಂದಾಗಿ ನಾವು ಈ ಬಗ್ಗೆ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ; ಗ್ಯಾಸ್ಟ್ರಿಕ್ ಸಂಬಂಧಿತ ಸಮಸ್ಯೆಗಳಿಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಇರುವ ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ಕೊಡುವುದರ ಜೊತೆಗೆ ಕೇಳುಗರ ಆರೋಗ್ಯ ಸಂಬಂಧಿತ ಪ್ರಶ್ನೆಗಳಿಗೆ ಸೂಕ್ತವಾದ ಮಾಹಿತಿಯನ್ನು ನೀಡಿದರು. 

- ಅಭಿಷೇಕ್ ಶೆಟ್ಟಿ, ರೇಡಿಯೋ ಸಾರಂಗ್