ಹಲೋ ವೆನ್ಲಾಕ್ 151 ನೇ ಸಂಚಿಕೆಯಲ್ಲಿ ಮಂಗಳೂರಿನ ಸರಕಾರೀ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ RMO ಸ್ಥಾನೀಯ ವೈದ್ಯಾಧಿಕಾರಿ ಡಾ ಸುಧಾಕರ್ ಅವರು ಭಾಗವಹಿಸಿದರು. ಖ್ಯಾತ ಮೂಳೆ ತಜ್ಞರಾದ ಡಾ. ಸುಧಾಕರ್ ಅವರು ಕುತ್ತಿಗೆ ನೋವು ಹಾಗೂ ಅದರ ನಿರ್ವಹಣೆಯ ಕುರಿತು ಮಾತನಾಡಿದರು.
ನಮ್ಮ ಜೀವನಶೈಲಿ ಹಾಗೂ ಕೆಲಸದ ಸಮಯ ಹಾಗೂ ವೈಖರಿ ಇವುಗಳೆಲ್ಲವೂ ಕುತ್ತಿಗೆ ನೋವಿಗೆ ಪ್ರಮುಖವಾದಂತಹ ಕಾರಣ. ಅದನ್ನು ನಾವೇ ಸರಿ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಕುತ್ತಿಗೆಗೆ ಅಗತ್ಯವಿರುವ ಒಂದಿಷ್ಟು ವ್ಯಾಯಾಮಗಳನ್ನು ಹಾಗೂ ಅದನ್ನು ಮಾಡಬೇಕಾದ ವಿಧಾನಗಳನ್ನು ಅವರು ತಿಳಿಸಿದರು. ಹಾಗೂ ನಾವು ಕೆಲಸ ಮಾಡುವ ಜಾಗದಲ್ಲಿ ಕುಳಿತುಕೊಳ್ಳುವ ಭಂಗಿ ಹೇಗಿರಬೇಕು ಎಂದು ವಿವರಿಸಿದರು. ಕುತ್ತಿಗೆ ನೋವಿಗೆ ಇತರ ಕಾರಣಗಳು, ಮುನ್ನೆಚ್ಚರಿಕೆ ಕ್ರಮಗಳು, ಪರಿಹಾರೋಪಾಯಗಳು ಯಾವುವು ಎಂದು ಡಾ. ಸುಧಾಕರ್ ಈ ಸಂದರ್ಭದಲ್ಲಿ ವಿವರಿಸಿದರು.
ಇದೇ ಸಂದರ್ಭದಲ್ಲಿ ವೆನ್ಲಾಕ್ ಆಸ್ಪತ್ರೆಯಿಂದ ಚಿಕಿತ್ಸೆಯನ್ನು ಪಡೆದು ಗುಣಮುಖರಾದ ಅನೇಕ ಕೇಳುಗರು ಕರೆಯನ್ನು ಮಾಡಿ ತಮ್ಮ ಕೃತಜ್ಞತೆಯನ್ನು ವೈದ್ಯರಿಗೆ ಸಲ್ಲಿಸಿದರು. ಅನೇಕ ಕೇಳುಗರು ಕರೆಯನ್ನು ಮಾಡಿ ಆರೋಗ್ಯ ಸಂಬಂಧಿತ ಪ್ರಶ್ನೆಗಳನ್ನು ಕೇಳಿದರು.
-RJ ಅಭಿಷೇಕ್ ಶೆಟ್ಟಿ, ರೇಡಿಯೋ ಸಾರಂಗ್