'ಫಿಸಿಯೋಥೆರಪಿ ಮೂಲಕ ಯಾವುದೇ ನೋವನ್ನು ಶಮನಗೊಳಿಸಬಹುದು' ಎಂದು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞರಾದ ಡಾ.ಉಮಾ ಶೆಟ್ಟಿ ಅವರು ಸೆಪ್ಟೆಂಬರ್ 15 ರಂದು ಹಲೋ ವೆನ್ಲಾಕ್ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಫಿಸಿಯೋಥೆರಪಿ ಎಂದರೆ ವೈದ್ಯಕೀಯ ಚಿಕಿತ್ಸೆಯ ಒಂದು ವಿಭಾಗ.ವೈದ್ಯಕೀಯ ಚಿಕಿತ್ಸೆಯ ಜೊತೆಗೆ ವ್ಯಾಯಾಮ, ಎಲೆಕ್ಟ್ರೋ ಥೆರಪಿ ಇವುಗಳನ್ನು ನೀಡಿ ರೋಗಿಯನ್ನು ಸಹಜ ಸ್ಥಿತಿಗೆ ತರುವ ಪ್ರಕ್ರಿಯೆ. ಫಿಸಿಯೋಥೆರಪಿಯಲ್ಲಿ ಆರ್ಥೋಥೆರಪಿ ಅಂದರೆ ಎಲುಬು ಅಥವಾ ಬೆನ್ನು ಹಾಗೂ ಕುತ್ತಿಗೆಗೆ ಸಂಬಂಧಪಟ್ಟದ್ದು ಮತ್ತು ನ್ಯೂರೋಥೆರಪಿ ಅಂದರೆ ನರಕ್ಕೆ ಸಂಬಂಧ ಪಟ್ಟದ್ದು ಇದರಲ್ಲಿ ಪಾರ್ಶ್ವವಾಯು ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ ಹಾಗೂ ಕಾರ್ಡಿಯೋ ಥೆರಪಿ ಇದು ಹೃದಯಕ್ಕೆ ಸಂಬಂಧ ಪಟ್ಟುದಾಗಿದೆ. ಅಷ್ಟೇ ಅಲ್ಲದೆ ಮಕ್ಕಳಿಗೆ ಸಂಬಂಧಪಟ್ಟ ಪೀಡಿಯಾಟ್ರಿಕ್ ಥೆರಪಿ ಕೂಡ ಫಿಸಿಯೋಥೆರಪಿಯ ಚಿಕಿತ್ಸಾ ವಿಧಾನಗಳು ಎಂದು ಅವರು ವಿವರಿಸಿದರು.
ಫಿಸಿಯೋಥೆರಪಿ ಯನ್ನು ಮನೆಯಲ್ಲಿ ಮಾಡಬಹುದು ಆದರೆ ತಜ್ಞರ ಸಲಹೆಯ ಮೂಲಕ ಮನೆಯಲ್ಲಿ ಚಿಕಿತ್ಸೆ ಪಡೆಯುವುದು ಅತೀ ಮುಖ್ಯ ಎಂದು ಹೇಳುತ್ತಾ ಈ course ನ್ನು ನೋವು ಕಡಿಮೆಯಾಗುವವರೆಗೂ
ಪೂರ್ತಿಯಾಗಿ ಮಾಡಬೇಕು. ಅರ್ಧದಲ್ಲೇ ನಿಲ್ಲಿಸಬಾರದು ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಫಿಸಿಯೋಥೆರಪಿಯನ್ನು ಸದೃಢ ದೇಹವನ್ನು ಹೊಂದಲು ಇಚ್ಛಿಸುವವರು ಮಾಡಬಹುದು.
ಇದರಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲ ಮತ್ತು ಯಾವುದೇ ನೋವು ಇಲ್ಲ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಗೆ ಅತ್ಯುತ್ತಮವಾದ ಸೌಲಭ್ಯವಿದೆ ಮತ್ತು ಒಳರೋಗಿಗಳಿಗೆ ಆಯುಷ್ಮಾನ್ ಯೋಜನೆಯ ಮೂಲಕ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಹೊರ ರೋಗಿಗಳು BPL ಕಾರ್ಡ್ ಹೊಂದಿದ್ದಲ್ಲಿ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಮತ್ತು APL ಕಾರ್ಡ್ ಹೊಂದಿದ್ದಲ್ಲಿ 100 ರೂಪಾಯಿ ಪಾವತಿಸಿ ಚಿಕಿತ್ಸೆ ಪಡೆಯಬಹುದು ಎಂಬ ಮಾಹಿತಿಯನ್ನು ನೀಡುತ್ತಾ ಹಲವಾರು ಕೇಳುಗರ ಪ್ರಶ್ನೆಗಳಿಗೆ ಡಾ. ಉಮಾ ಶೆಟ್ಟಿಯವರು ಉತ್ತರಿಸಿದರು.
-RJ Bindiya Kulal