Gopinath Kapikad: ಕಬಡ್ಡಿ ಶಕ್ತಿ ಯುಕ್ತಿಯ ಜಾನಪದ ಕ್ರೀಡೆ

 
ದೈಹಿಕ ಸಾಮರ್ಥ್ಯ ಬಲಗೊಳಿಸುವ ಶಕ್ತಿ ಯುಕ್ತಿಯ ಜಾನಪದ ಕ್ರೀಡೆ ಕಬಡ್ಡಿ, ಎಂದು ಖ್ಯಾತ ರಾಷ್ಟ್ರೀಯ ಕಬಡ್ಡಿ ಆಟಗಾರ ಗೋಪಿನಾಥ್ ಕಾಪಿಕಾಡ್ ಅಭಿಪ್ರಾಯಪಟ್ಟರು.
 
ಆವರು ಎಪ್ರಿಲ್ 29ರಂದು ಬುಧವಾರ ರೇಡಿಯೋ ಸಾರಂಗ್'ನಲ್ಲಿ ನಡೆದ ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
 
 
 
 
 
ಮೂಲತ ಕಾಸರಗೋಡಿನ ನಿವಾಸಿಯಾದ ಇವರು ಬಾಲ್ಯದಲ್ಲಿ ಊರಿನಲ್ಲಿ ನಡೆಯುತ್ತಿದ್ದ ಕಬಡ್ಡಿ ಆಟದತ್ತ ಆಸಕ್ತಿಯನ್ನು ಬೆಳೆಸಿಕೊಂಡರು. ನಂತರ ತನ್ನ ಅದ್ಬುತ ಪ್ರದರ್ಶನದಿಂದ ರಾಷ್ಟ್ರೀಯ ಮಟ್ಟದ ಆಟಗಾರನಾಗಿ ಮಿಂಚಿದರು. 50-52ರಿಂದ ಅರಂಭವಾದ ಅಖಿಲಭಾರತ ಅಂತರ್ ವಿಶ್ವವಿದ್ಯಾನಿಲಯ ಕಬಡ್ಡಿ ಪಂದ್ಯಾಟದ ಕರ್ನಾಟಕ ರಾಜ್ಯ ವಿಶ್ವವಿಧ್ಯಾನಿಲಯದ ಅಳಿಸಲಾಗದ ದಾಖಲೆ ಇನ್ನೂ ಇವರ ಹೆಸರಲ್ಲಿದೆ.
 
ಇವರು ಕರ್ನಾಟಕ ರಾಜ್ಯವಲ್ಲದೆ ಕೇರಳ ರಾಜ್ಯವನ್ನು ಪ್ರತಿನಿಧಿಸಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಿದ್ದಾರೆ. ದಕ್ಷಿಣ ಭಾರತವನ್ನು ಪ್ರತಿನಿಧಿಸಿ ಹಲವಾರು ಚಿನ್ನದ ಪದಕ, ರಜತ ಪದಕಗಳನ್ನು ಪಡೆದಿದ್ದಾರೆ.
 
"ಕಬಡ್ಡಿ ಕ್ರೀಡೆಯಲ್ಲಿ ಸಾಧನೆಯ ಜೊತೆಗೆ ನೋವು, ಅವಮಾನ ಅನುಭವಿಸಿದ ನನಗೆ ಸರಕಾರಿ ಕೆಲಸ ದೊರೆಯದ್ದರಿಂದ.10ವರ್ಷ ವಿದೇಶದಲ್ಲಿ ದುಡಿದು ಈಗ ನನ್ನದೇ 'ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ' ಸ್ಥಾಪಿಸಿ ಮಕ್ಕಳಿಗೆ ತರಬೇತಿ ನೀಡಿ ಖುಷಿ ಪಡುತ್ತಿದ್ದೇನೆ," ಎಂದರು. "ಹಿಂದೆ ನಾನು ಕಬಡ್ಡಿ ಆಡುವಾಗ ಒಂದು ಚಾ ಸಿಗುವುದೇ ಕಷ್ಟವಾಗುತ್ತಿತ್ತು. ಈಗ ಆಟಗಾರರಿಗೆ ಹಲವಾರು ಸಾವಿರ ಸಿಕ್ಕರೂ ಹಿಂದಿನ ಮಣ್ಣಿನ ಕ್ರೀಡೆಯ ಜನಪ್ರಿಯತೆ ಮರೆಯಾಗುತ್ತಿದೆ. ಇದಕ್ಕೆ ಕಬಡ್ಡಿ ವ್ಯಾಪಾರೀಕರಣಗೊಳ್ಳುತ್ತಿರುವುದು ಪ್ರಮುಖ ಕಾರಣ," ಎಂದರು.
 
ಹಲವಾರು ಕೇಳುಗರ ಕರೆಗಳಿಗೆ ಉತ್ತರಿಸಿದ ಇವರು ಸಂತಸ ವ್ಯಕ್ತಪಡಿಸಿದರು.
 
- ಎಡ್ವರ್ಡ್ ಲೋಬೊ ರೇಡಿಯೋ ಸಾರಂಗ್