Joyce Pinto, Kinnigoli: ಮನದ ನೋವು ಮರೆಯಲು ಕವಿತೆ ಬರೆದೆ

ಓರ್ವ ಸ್ತ್ರೀಯಾಗಿ ಸಮಾಜದಲ್ಲಿ ಕಂಡು ಅನುಭವಿಸಿದ ನೋವುಗಳೇ ನನ್ನ ಕವಿತೆಯ ವಸ್ತುಗಳಾಗಿವೆ. ಇದು ಸ್ತ್ರೀವಾದಿ ಕವಯತ್ರಿಯಾಗಿ ನನ್ನನ್ನು ಬೆಳೆಸಿದೆ. ಮನದ ನೋವು ಮರೆಯಲು ನಾನು ಕವಿತೆ ಬರೆದೆ, ಎಂದು ಕವಯತ್ರಿ  ಜೋಯ್ಸ್ ಪಿಂಟೋ ಕಿನ್ನಿಗೋಳಿ ನುಡಿದರು.

ಅವರು ಮೇ 29ರಂದು ಸೋಮವಾರ  ರೇಡಿಯೋ ಸಾರಂಗ್'ನಲ್ಲಿ ನಡೆದ ತಾಳೊ ಉಮಾಳೊ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತಾನಾಡಿದರು.

ಶಾಲಾ ನೋಟಿಸ್ ಬೋರ್ಡಿನಲ್ಲಿದ್ದ ಕವಿತೆಗಳನ್ನು ಓದಿ ಪ್ರೇರಣೆ ಪಡೆದು ನಾನು ಕವಿತೆ  ರಚಿಸಲು ಅರಂಭಿಸಿದೆ. ಶಿಕ್ಷಕರಾದ ಸುಮುಖಾನಂದ ಜಲವಳ್ಳಿ, ಕವಿ ವಿಲ್ಸನ್ ಕಟೀಲ್ ಅವರ ಮಾರ್ಗದರ್ಶನ ಪ್ರಭುದ್ದ ಕವಿತೆ ರಚಿಸಲು ಕಾರಣವಾಯಿತಲ್ಲದೆ ಕನ್ನಡ ಕವಿತಾ ಪುಸ್ತಕ ಪ್ರಕಟನೆಗೆ ಸಹಕಾರಿಯಾಯಿತು, ಎಂದರು. ಪೊಯೆಟಿಕ್ಸ್, ಪೊಯೆಟಿಕಾ ಸಹಿತ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಇವರು ಕೊಂಕಣಿ ಹಾಡುಗಳನ್ನು ಬರೆದಿದ್ದಾರೆ. ಸಹೋದರನ ಕೇಟರಿಂಗ್ ಉದ್ಯಮದಲ್ಲಿ ಜೊತೆಯಾಗಿ ದುಡಿಯುತ್ತಿರುವ ಇವರು ಸಾಹಿತ್ಯ ಚಟುವಟಿಕೆ ನನ್ನ ಬದುಕಿನ ಸೆಲೆಯಾಗಿದೆ, ಎಂದರು.

ಹಲವಾರು ಕವಿತೆಗಳನ್ನು ವಾಚಿಸಿದ ಇವರು ಕೇಳುಗರೊಂದಿಗೆ ಮಾತಾನಾಡಿ ಖುಷಿಪಟ್ಟರು.

- ಎಡ್ವರ್ಡ್ ಲೋಬೊ, ರೇಡಿಯೋ ಸಾರಂಗ್