ನನ್ನಲ್ಲಿ ಅಡಗಿದ್ದ ಧ್ವನಿ ಅನುಕರಣೆಯ ಮಿಮಿಕ್ರಿ ಕಲೆಯು ನನ್ನನ್ನು ವಿಶ್ವಖ್ಯಾತಿಗೊಳಿಸಲು ಕಾರಣವಾಯಿತು, ಎಂದು ನಿರೂಪಕ ಮಿಮಿಕ್ರಿ ಕಲಾವಿದ ಕೆ.ಬಿ.ಸುದರ್ಶನ್ ಮಂಗಳೂರು ನುಡಿದರು. ಇವರು ಜೂನ್ 15ರಂದು ಬುಧವಾರ ರೇಡಿಯೋ ಸಾರಂಜಿ'ನ ಹೃದಯರಾಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪುತ್ತೂರಿನ ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿರುವಾಗ ಅಲ್ಲಿನ ಉಮಾ ಟೀಚರ್ ಅವರ ಪ್ರತಿಭೆಯನ್ನು ಗುರುತಿಸಿ ನೀಡಿದ ಪ್ರೋತ್ಸಾಹವನ್ನು ನೆನಪಿಸಿದರು. ಸಿಂಡಿಕೇಟ್ ಬ್ಯಾಂಕಿನಲ್ಲಿ 33 ವರ್ಷ ಸೇವೆ ಸಲ್ಲಿಸಿದ ಇವರು ನಿವೃತ್ತ ಜೀವನವನ್ನು ಈಗ ಮಂಗಳೂರಿನ ಕೊಟ್ಟಾರದಲ್ಲಿ ಕಳೆಯುತ್ತಿದ್ದು 66 ವರ್ಷ ವಯಸ್ಸಿನವರಾಗಿದ್ದು ಈಗ ಹೆಚ್ಚಿನ ಮಿಮಿಕ್ರಿ ಪ್ರದರ್ಶನದಲ್ಲಿ ಬಾಗವಹಿಸುತ್ತಿಲ್ಲವೆಂದು ತಿಳಿಸಿ ದರು.
ಬೆಂಗಳೂರಿನ ಶಾಖೆಯಲ್ಲಿ ಉದ್ಯೋಗಿಯಾಗಿದ್ದಾಗ ಚಿತ್ರ ನಟ ಬಾಲಕೃಷ್ಣ ಅವರನ್ನು ಭೇಟಿಯಾಗಿ 'ಸಂಸಾರ ನೌಕೆ' ಚಲನಚಿತ್ರದಲ್ಲಿ ಅಭಿನಯಿಸಿದ್ದು, ಪುತ್ತೂರು ನರಸಿಂಹನಾಯಕ್ ಅವರ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ್ದು, ಮಿಮಿಕ್ರಿ ದಯಾನಂದ್ ಜೊತೆ ಕಾರ್ಯಕ್ರಮ ನೀಡಿದ್ದನ್ನು ನೆನಪಿಸಿದರು. ಡಾ. ಶಿವರಾಮ ಕಾರಂತರ 'ಮಲೆಯ ಮಕ್ಕಳು' ಸಿನಿಮಾಕ್ಕೆ ಆಡಿಷನ್ ನೀಡಿದಾಗ ಅವರು ಅಭಿನಯ ಮೆಚ್ಚಿದ್ದು ದೇಹದ ಮೈಕಟ್ಟು ಪಾತ್ರಕ್ಕೆ ಹೊಂದಿಕೆಯಾಗದ ಬಗ್ಗೆ ಉತ್ತರಿಸಿದ ಪತ್ರವನ್ನು ಜೋಪಾನವಾಗಿರಿಸಿದ್ದೇನೆ, ಎಂದರು.