Radio Sanje: ಕತ್ತೆ ಸಾಕಾಣಿಕೆ ಕುರಿತು ರೇಡಿಯೋ ಸಂಜೆಯಲ್ಲಿ ಶ್ರೀನಿವಾಸ್ ಗೌಡ ಮತ್ತು ಜಯಶ್ರೀ ಕರ್ಕೇರ

ಜೂನ್ 24 ರೇಡಿಯೋ ಸಂಜೆ ನೇರಪ್ರಸಾರ ಕಾರ್ಯಕ್ರಮದಲ್ಲಿ ಕರ್ನಾಟಕದ ಮೊದಲ ಕತ್ತೆ ಸಾಕಾಣಿಕೆ ಘಟಕದ ಮುಖ್ಯಸ್ಥರಾದ ಶ್ರೀನಿವಾಸಗೌಡ ಹಾಗೂ ಜಯಶ್ರೀ ಕರ್ಕೇರ ಭಾಗವಹಿಸಿದ್ದರು. ಭಾರತದಲ್ಲಿ ಅತಿ ಹೆಚ್ಚು ನಿರ್ಲಕ್ಷಕ್ಕೆ ಒಳಗಾದ ಪ್ರಾಣಿಗಳಲ್ಲಿ ಕತ್ತೆ ಕೂಡ ಒಂದು. ಇದರ ಸಂತತಿಯು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಕತ್ತೆಗಳ ಉಪಯೋಗವನ್ನು ತಿಳಿಸಿಕೊಡುವಲ್ಲಿ ಹಾಗೂ ಕತ್ತೆ ಹಾಲಿನಿಂದ ಆಗುವಂತಹ ಉಪಯೋಗಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಹ ನಿಟ್ಟಿನಲ್ಲಿ ಸಾಕಾಣಿಕೆ ಘಟಕವನ್ನು ಆರಂಭಿಸಿದ್ದೇವೆ ಎಂದು ತಿಳಿಸಿದರು. 

ಕಾರ್ಯಕ್ರಮದ ಉದ್ದಕ್ಕೂ ಅನೇಕ ಕೇಳುಗರು ಕರೆ ಮಾಡಿ ಕತ್ತೆ ಹಾಲಿನ ಬಗೆಗಿನ ಹಾಗೂ ಕತ್ತೆಯ ಬಗೆಗಿನ ಅವರ ಅನೇಕ ಕುತೂಹಲದ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಸಮರ್ಪಕವಾದ  ಉತ್ತರವನ್ನು ಶ್ರೀನಿವಾಸ್ ಮತ್ತು ಜಯಶ್ರೀ ಅವರು ನೀಡಿದರು. 

ದಕ್ಷಿಣ ಕನ್ನಡ ಜಿಲ್ಲೆಯ ಇರಾ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಈ ಕತ್ತೆ ಸಾಕಾಣಿಕೆ ಘಟಕದ ಜೊತೆಗೆ ಕೋಳಿ ಸಾಕಾಣಿಕೆ  ಹಾಗೂ ಕುರಿ, ಆಡು ಸಾಕಾಣಿಕೆಯನ್ನು ಕೂಡ ಐಸಿರಿ ಫಾರ್ಮ್'ನ ಮೂಲಕ ಮಾಡಲಾಗುತ್ತಿದೆ. ಇದರ ಜೊತೆಗೆ ಹೈನುಗಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಇಚ್ಛಿಸುವವರಿಗೆ ತರಬೇತಿಯನ್ನು ನೀಡುವ ಕಾರ್ಯವನ್ನು ಕೂಡ ಸಂಸ್ಥೆಯ ಮೂಲಕ ಮಾಡಲಾಗುತ್ತಿದೆ, ಎಂದರು. 
 
- ಅಭಿಷೇಕ್ ಶೆಟ್ಟಿ, ರೇಡಿಯೋ ಸಾರಂಗ್