Ranjan Boloor: ಹಾಸ್ಯ ಪ್ರವೃತ್ತಿ ಹಾಸ್ಯ ನಟನ ಸ್ಥಾನ ನೀಡಿತು

ನನ್ನಲ್ಲಿದ್ದ ಹಾಸ್ಯ ಪ್ರವೃತ್ತಿ ವೇದಿಕೆಯಲ್ಲಿ ಹಾಸ್ಯ ನಟನಾಗಿ ಗುರುತಿಸುವಂತೆ ಮಾಡಿತಲ್ಲದೇ ರಂಗಭೂಮಿ, ಚಲನಚಿತ್ರ, ಬಲೆ ತೆಲಿಪಾಲೆ ಹಾಸ್ಯ ಕಾರ್ಯಕ್ರಮಗಳಲ್ಲಿ ಜನಪ್ರಿಯತೆಯನ್ನು ಗಳಿಸಲು ಕಾರಣವಾಯಿತು ಎಂದು ರಂಗ ಭೂಮಿ, ಚಲನಚಿತ್ರ ನಟ ರಂಜನ್  ಬೋಳೂರು ನುಡಿದರು. ಅವರು ಜುಲೈ 5ರಂದು ರೇಡಿಯೋ ಸಾರಂಗ್ ನಲ್ಲಿ ನಡೆದ ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

      ಫ್ರೆಂಡ್ಸ್ ಮಂಗಳೂರು ತಂಡದ ಮೂಲಕ ಬಲೆ ತೆಲಿಪಾಲೆ ಕಾರ್ಯಕ್ರಮದಲ್ಲಿ ಕಂಡಕ್ಟರ್ ಪಾತ್ರ ನಿರ್ವಹಿಸಿ ಗುರುತಿಸಲ್ಪಟ್ಟ ನನ್ನನ್ನು ಮೆಚ್ಚಿದ ಜನರು ರಂಗಭೂಮಿಯಲ್ಲಿ ಭಧ್ರ ನೆಲೆ ಒದಗಿಸಿದರು. ಜನರ ಅಭಿಮತದ ಮುಂದೆ ದಂಡ್, ಎಕ್ಕಸಕ, ಉಮಿಲ್, ಪಿಲಿಬೈಲ್ ಯಮುನಕ್ಕ, ಇನ್ನೂ ಹಲವಾರು ಕನ್ನಡ, ತುಳು ಸಿನಿಮಾಗಳಲ್ಲಿ  ಅವಕಾಶ ಕಲ್ಪಿಸಿತು. ಇತ್ತೀಚೆಗೆ ಗುಡ್ ಬೈ ಕೊಂಕಣಿ ನಾಟಕದಲ್ಲೂ ಅಭಿನಯಿಸಿದ ಇವರು ಕಲೆಗೆ ಭಾಷೆಯ ಬಂಧನವಿರಬಾರದು ಎಂದರು. ಥಿಯೇಟರ್ ಬೇಸ್ ಇರುವ ನಾಟಕಗಳಲ್ಲಿ ಭಾವ ಅಭಿನಯದ ಜತೆಗೆ ಕಲಿಕೆಗೆ ಅವಕಾಶವಿದೆ ಎಂದರು. ದ.ಕ, ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೆಡರೇಶನ್ ನಲ್ಲಿ ಉದ್ಯೋಗಿಯಾಗಿರುವ ಇವರು ಬಿಡವಿನ ವೇಳೆಯನ್ನು ಕಲಾರಂಗದಲ್ಲಿ ಕಳೆಯುತ್ತಾರೆ. ಸಿನಿಮಾ, ನಾಟಕದ ಸಂಭಾಷಣೆ ಹೇಳಿ ರಂಜಿಸಿದ ಇವರು ಹಲವಾರು ಕೇಳುಗರ ಕರೆಗಳಿಗೆ ಉತ್ತರಿಸಿದರು.

- RJ ಎಡ್ವರ್ಡ್ ಲೋಬೊ ರೇಡಿಯೋ ಸಾರಂಗ್