ಫೆಬ್ರುವರಿ 8 ಬುಧವಾರ ರೇಡಿಯೋ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷರಾದ ಶ್ರೀ ಹರ್ಷ ಅವರು ಭಾಗವಹಿಸಿದ್ದರು. ಅಂಚೆ ಇಲಾಖೆ ನಡೆದು ಬಂದ ದಾರಿ, ಬದಲಾವಣೆಗಳು, ಇಂದಿನ ಅಗತ್ಯತೆಗಳು, ಪೋಸ್ಟ್ ಮಾಸ್ಟರ್, ಪೋಸ್ಟ್ ಮ್ಯಾನ್ ಗಳ ಜವಾಬ್ದಾರಿಗಳ ಜೊತೆಗೆ ಅಂಚೆ ಇಲಾಖೆಯಲ್ಲಿರುವಂತ ಉದ್ಯೋಗಾವಕಾಶಗಳ ಬಗೆಗೆ ಮಾಹಿತಿಯನ್ನು ನೀಡಿದರು.
ಹಿಂದಿನ ಕಾಲದಿಂದಲೂ ಅಂಚೆ ಇಲಾಖೆ ಬಗ್ಗೆ ಜನರಿಗೆ ಇರುವಂತ ವಿಶ್ವಾಸ, ಆ ವಿಶ್ವಾಸವನ್ನು ಇಂದಿನ ದಿನವೂ ಕೂಡ ಅಂಚೆ ಇಲಾಖೆ ಮುಂದುವರಿಸಿಕೊಂಡು ಬಂದಿದೆ, ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಂಚೆ ಇಲಾಖೆಗೆ ಸಂಬಂಧಿಸಿದ ಕೇಳುಗರ ಅನೇಕ ಪ್ರಶ್ನೆಗಳಿಗೆ ಶ್ರೀ ಹರ್ಷ ಅವರು ಉತ್ತರ ನೀಡುವುದರ ಜೊತೆಗೆ ಇಲಾಖೆಯಲ್ಲಿರುವಂತ ಉಳಿತಾಯ ಯೋಜನೆಗಳು, ವಿಮಾ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹೇಗೆ ತಯಾರಾಗಬೇಕು ಎಂದು ತನ್ನ ಸ್ವಂತ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತು ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು.
- ಅಭಿಷೇಕ್ ಶೆಟ್ಟಿ, ರೇಡಿಯೋ ಸಾರಂಗ್