ಬಡ ಕುಟುಂಬದ ಹಿನ್ನೆಲೆಯ ನನಗೆ ನಗುವಿನ ಬದಲು ಅಳುವೇ ಸoಗಾತಿಯಾಗಿತ್ತು. ನಗು ಮರೀಚಿಕೆಯಾಗಿದ್ದ ನನಗೆ ನಗಲು ಕಲಿಸಿದ್ದು ರಂಗಭೂಮಿ, ಎಂದು ಬಹುಭಾಷಾ ನಟಿ ಸುಮನಾ ಪೆರ್ಮನ್ನೂರ್ ನುಡಿದರು.
ಅವರು ಸೆಪ್ಟೆಂಬರ್ 12ರಂದು ರೇಡಿಯೋ ಸಾರಾಂಗ್'ನಲ್ಲಿ ನಡೆದ 'ತಾಳೊ ಉಮಾಳೊ' ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಂಗಳೂರಿನ ಬೋಂದೆಲ್'ನಲ್ಲಿ ಬಾಲ್ಯ ಕಳೆದ ಇವರಿಗೆ ಶಾಲಾ ದಿನಗಳಿಂದ ನ್ರತ್ಯ ನಟನೆ ಎಂದರೆ ಆಕರ್ಷಣೆ. ಪಿ. ಯು. ಸಿ ಮೊದಲನೆ ವರ್ಷದಲ್ಲಿದ್ದಾಗ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರ 'ಗಾಂಟಿ' ನಾಟಕದಲ್ಲಿ ನಾಯಕಿಯಾಗಿ ಅಭಿನಯಿಸಿ ರಾಷ್ಟ್ರೀಯ ಪ್ರಶಸ್ತಿ ಪಡೆದದ್ದು ಆತ್ಮೀಯ ಕ್ಷಣವಾದರೆ, ಚಿತ್ರನಟ ಶಿವರಾಜ್ ಕುಮಾರ್'ರವರ ಸಿನಿಮಾಕ್ಕೆ ಹೀರೋಯಿನ್ ಆಗಲು ಕರೆ ಬಂದು ಅಣ್ಣನ ಮಾತಿನಿಂದ ಅವಕಾಶ ಮಿಸ್ ಮಾಡಿಕೊಂಡದ್ದು ಈಗಲೂ ಕಾಡುವ ಕಹಿನೆನಪು, ಎಂದರು.
ಕಾಪಿಕಾಡ್, ಕೊಡಿಯಲ್'ಬೈಲ್, ಶಾರದ ಮಂಜೇಶ್ವರ ಮುಂತಾದ ತಂಡಗಳಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ ಇವರು ಕಳೆದ 33 ವರ್ಷಗಳಿಂದ ಕನ್ನಡ, ತುಳು, ಕೊಂಕಣಿ ನಾಟಕ ಹಾಗೂ ಚಲನಚಿತ್ರರಂಗದಲ್ಲಿದ್ದೇನೆ, ಎಂದು ತಿಳಿಸಿದರು. ನಟಿಯಾಗದಿದ್ದರೆ ಶಿಕ್ಷಕಿಯಾಗುವ ಕನಸಿತ್ತು, ಎಂದು ಮನದಾಸೆ ವ್ಯಕ್ತಪಡಿಸಿದರು.
ನಾಯಕಿ, ವಿಲನ್ ಪಾತ್ರ ನಿರ್ವಹಿಸಿದ ನನಗೆ ಈಗ ಹಾಸ್ಯ ಪಾತ್ರ ಅರಸಿ ಬರುತ್ತಿವೆ. ಇದಕ್ಕೆ ನಾನು ದೈಜಿವರ್ಲ್ಡ್ ಚಾನೆಲ್'ನಲ್ಲಿ ನೀಡಿದ 'ಯೆಯಾ ಹಾಸಯಾ' ಮತ್ತು 'ಕಾಮಿಡಿ ಚಾಂಪಿಯನ್' ಕಾರಣ, ಎಂದರು. ಪ್ರಸ್ತುತ 'ಅಲ್ಶಿ ರೆಡೆ' ಕೊಂಕಣಿ ಚಲನಚಿತ್ರದಲ್ಲಿ ಅಭಿನಯಿಸಿದ್ದು ಎಲ್ಲೆಡೆಯಿಂದ ಮೆಚ್ಚುಗೆ ಬರುತ್ತಿದೆ, ಎಂದರು. ಮನೆಯವರ, ಅಭಿಮಾನಿಗಳ ಪ್ರೋತ್ಸಾಹ ನನ್ನನ್ನು ಮುನ್ನಡೆಸಿದೆ. ಎಂದು ಅಭಿಪ್ರಾಯ ಪಟ್ಟರು. ಕೇಳುಗರ ಕರೆಗಳಿಗೆ ಉತ್ತರಿಸಿದರು.
- ಎಡ್ವರ್ಡ್ ಲೋಬೊ, ರೇಡಿಯೋ ಸಾರಂಗ್