Sunitha D'Souza Permannnur: ಮನೆ ಮಾತುಗಳೇ ನಟಿಯಾಗಿಸಿದವು 

 
ಮನೆಯಲ್ಲಿ ಮಾತಾಡುತ್ತಿದ್ದ ಮಾತುಗಳೇ ಪಾತ್ರದ ಸಂಭಾಷಣೆಯಾದಾಗ ಸಹಜವಾಗಿ ಅಭಿನಯ ಸಾಧ್ಯವಾಯಿತು. ಪಾತ್ರಕ್ಕೆ ಜೀವ ತುಂಬಿದ ಈ ಮಾತುಗಳು ನನ್ನನ್ನು ನಟಿಯಾಗಿ ರೂಪಿಸಿ ಮನೆ ಮಾತಾಗಿಸಿತು, ಎಂದು ರಂಗನಟಿ, ಕ್ರೀಡಾಪಟು ಸುನೀತಾ ಡಿಸೋಜಾ,  ಪೆರ್ಮನ್ನೂರ್ ನುಡಿದರು.
 
ಅವರು ಜೂ 5ರಂದು ಸೋಮವಾರ ರೇಡಿಯೊ ಸಾರಂಗ್'ನಲ್ಲಿ ನಡೆದ 'ತಾಳೊ ಉಮಾಳೊ' ನೇರ ಪ್ರಸಾರ ಕಾರ್ಯಕ್ರಮದಲ್ಲಿಅತಿಥಿಯಾಗಿ ಭಾಗವಹಿಸಿ ಮಾತಾನಾಡಿದರು.
 
 
 
 
 
 
ಶಾಲಾದಿನಗಳಲ್ಲಿ ಕಿರುನಾಟಕಗಳಲ್ಲಿ ಅಭಿನಯಿಸುತ್ತಾ ನಾಟಕದ ಬಗ್ಗೆ ಆಸಕ್ತಿ ಹೊಂದಿದ ನಾನು ಜಾನ್.ಎಂ.ಪೆರ್ಮನ್ನೂರ್ ಇವರ 'ಕಲಾ ಕುಟಾಮ್' ತಂಡವನ್ನು ಸೇರಿ ಕೊಂಕಣಿ ನಾಟಕಗಳಲ್ಲಿ  ಅಭಿನಯಿಸಿದೆ. ನಮ್ಮೂರಿನ ಭಾಷೆಯ ಸೊಗಡಿರುವ "ಪಾಸ್" ಕೊಂಕಣಿ ನಾಟಕದ "ಮೆಚ್ಚ" ಎನ್ನುವ ಮುಗ್ಧ ಹುಡುಗಿಯ ಪಾತ್ರ ಜನಮೆಚ್ಚಿಗೆ ಗಳಿಸಿದ್ದು ನನ್ನೊಳಗಿನ ಕಲಾವಿದೆಯನ್ನು ಜನ ಗುರುತಿಸುವಂತಾಯಿತು, ಎಂದು ನುಡಿದರು. 
 
ನಾಟಕವಲ್ಲದೆ ನ್ರತ್ಯ,ಕರಾಟೆ, ಅಥ್ಲೆಟಿಕ್ಸ್, ಮ್ಯಾರಥಾನ್ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ಇವರು ಎರೊಬಿಕ್ಸ್, ಜುಂಬಾ ಕ್ರೀಡೆಯಲ್ಲಿ ಪರಿಣಿತರಾಗಿದ್ದಾರೆ. ಹಾಗೆಯೇ ಕರಕುಶಲ ಕಲೆಯಲ್ಲಿ ನುರಿತರಾಗಿ ಹಲವಾರು ಕಾರ್ಯಾಗಾರ, ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ವಿದೇಶದಲ್ಲಿಉದ್ಯೋಗಿಯಾಗಿರುವ ಇವರು ಕಿರುಚಿತ್ರಗಳಲ್ಲಿ ನಟಿಸಿದ್ದು ನಟನಾ ಅಕಾಡೆಮಿಯನ್ನು ಸ್ಥಾಪಿಸುವ ಆಸಕ್ತಿ ಹೊಂದಿದ್ದಾರೆ 
 
ನಾಟಕದ ಸಂಭಾಷಣೆ ಹೇಳಿ ರಂಜಿಸಿದ ಸುನಿತಾ ಡಿ' ಸೋಜಾ  ಹಲವಾರು ಕೇಳುಗರ ಕರೆಗಳಿಗೆ ಉತ್ತರಿಸಿದರು.
 
- ಎಡ್ವರ್ಡ್ ಲೋಬೋ,  ರೇಡಿಯೋ  ಸಾರಂಗ್