Vasant M. Bolar: ಬದುಕಿಗೆ  ನಾದ  ತುಂಬಿದ ಸ್ಯಾಕ್ಸೊಪೋನ್ 

ಸುಳ್ಯ ಮಂಡೆಕೋಲು ಎಂಬಲ್ಲಿರುವ ನಮ್ಮ ಮನೆಯಲ್ಲಿ ನಡೆಯುತ್ತಿದ್ಧ ಅತ್ತೆ ಮಗನ ಸ್ಯಾಕ್ಸೊಪೋನ್ ವಾದನದ ಅಭ್ಯಾಸ ವೀಕ್ಷಿಸಿ ಆಸಕ್ತಿಯಿಂದ ಸ್ಯಾಕ್ಸೊಪೋನ್ ಕಲಿತೆ. ಇದು ನನ್ನ ಬದುಕಿಗೆ ನಾದ ತುಂಬಿ ಅಸರೆ ನೀಡಿದ್ದಲ್ಲದೆ ಖ್ಯಾತಿಯನ್ನು ತಂದಿದೆ, ಎಂದು ಸ್ಯಾಕ್ಸೊಪೋನ್ ವಾದಕ ವಸಂತ್ ಎಂ ಬೋಳಾರ್  ನುಡಿದರು.
 
 
 
 
 
ಅವರು ಇದೇ ಮೇ  17ರಂದು ಬುಧವಾರ ರೇಡಿಯೋ ಸಾರಂಗ್'ನಲ್ಲಿ ನಡೆದ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತಾನಾಡಿದರು.
 
ಕುತೂಹಲದಿಂದ ಕೈಯಲ್ಲಿ ಹಿಡಿದ ಸ್ಯಾಕ್ಸೊಪೋನ್ ಒಡನಾಡಿಯಾಗಿ 20 ವರ್ಷಗಳವರೆಗೆ ನನ್ನ ಕೈ ಹಿಡಿದು ನಡೆಸಿದೆ. ಹಲವಾರು ಸಂಗೀತಾಭಿಮಾನಿಗಳನ್ನು ನೀಡಿದೆ, ಎಂದರು. ಶ್ರೀ ಕೊಲ್ಲೂರು ಕ್ಷೇತ್ರದಲ್ಲಿ ಪಡೆದ ಗೌರವ ಮರೆಯಾಲಾಗದ್ದು ಎಂದು ನೆನೆದರು.
 
ರಾಜ್ಯ, ಹೊರರಾಜ್ಯಗಳಲ್ಲಿ ಭಕ್ತಿಗೀತೆ, ಭಾವಗೀತೆ, ಜಾನಪದ, ಚಿತ್ರಗೀತೆ  ನುಡಿಸುವ ಇವರು ಅರ್.ಪ್ರಭಾಕರ್ ಶ್ರಿರಂಗಪಟ್ಟಣ, ಮೈಸೂರು ಇವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಿನ್ನೆಲೆಯಲ್ಲಿ ಸ್ಯಾಕ್ಸೊಪೋನ್ ಅಭ್ಯಾಸ ಮಾಡಿದ್ದಾರೆ. ಪ್ರಸ್ತುತ ಹಳೆಕೋಟೆ ಶ್ರೀಮಾರಿಯಮ್ಮ ದೇವಸ್ಥಾನ ಬೋಳಾರ ಇಲ್ಲಿ ಸ್ಯಾಕ್ಸೊಪೋನ್ ವಾದನ ಸೇವೆ ನೀಡುತ್ತಿದ್ದಾರೆ.
 
ಹಲವಾರು ಕೇಳುಗರೊಂದಿಗೆ ಮಾತಾನಾಡಿದ ಅವರು ಸ್ಯಾಕ್ಸೊಪೋನ್ ನುಡಿಸಿ ರಂಜಿಸಿದರು.
 
- ಎಡ್ವರ್ಡ್ ಲೋಬೊ  ರೇಡಿಯೋ ಸಾರಂಗ್